` ಸಕ್ಸಸ್ ಆಯ್ತು ಶಿವಣ್ಣ ಹೋರಾಟ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shivanna's fight wins
Shivarajkumar Image

ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ಮನೆ ಮಾಡಿರುವ ಶಿವರಾಜ್ ಕುಮಾರ್ ಅವರಿಗೆ ಅಲ್ಲಿನ ನಿವಾಸಿಗಳೆಲ್ಲ ಒಂದು ಬೇಡಿಕೆಯನ್ನಿಟ್ಟು, ಪರಿಹರಿಸುವಂತೆ ಮನವಿ ಮಾಡಿದ್ದರು. ಅಲ್ಲಿನ ನಾಗರಿಕರ ಸಮಸ್ಯೆ ಟ್ರಾಫಿಕ್ ಜಾಮ್. ಮಾನ್ಯತಾ ಟೆಕ್ ಪಾರ್ಕ್‍ನಲ್ಲಿ ವಿಪರೀತ ಎನ್ನಿಸುವಷ್ಟು ವಾಹನಗಳ ಓಡಾಟದಿಂದ ನಾಗರಿಕರು ತೊಂದರೆಗೊಳಗಾಗಿದ್ದರು.

ಮೊದಲು ನಾಗರಿಕರ ಜೊತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್, ನಂತರ ಸಚಿವ ರಾಮಲಿಂಗಾ ರೆಡ್ಡಿ ಅವರನ್ನೂ ಭೇಟಿ ಸಮಸ್ಯೆ ನಿವಾರಣೆಗೆ ಕೇಳಿಕೊಂಡಿದ್ದರು. ಇದಾದ ಮೇಲೆ ಸ್ವತಃ ರಾಮಲಿಂಗಾ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಈಗ ಮಾನ್ಯತಾ ಟೆಕ್ ಪಾರ್ಕ್‍ನ 1,2,3,4 ಹಾಗೂ 5ನೇ ಪ್ರವೇಶ ದ್ವಾರಗಳಲ್ಲಿ ಬೆಳಗ್ಗೆ 6.30ರಿಂದ ರಾತ್ರಿ 8.30ರವರೆಗೆ ಒನ್ ವೇ ಮಾಡಲಾಗಿದೆ.

Related Articles :-

ರಾಮಲಿಂಗಾ ರೆಡ್ಡಿ ಜೊತೆ ಶಿವಣ್ಣ, ಏನ್ ಪ್ರಾಬ್ಲಮ್ಮು..?

#

Smuggler Release Meet Gallery

Rightbanner02_tora_inside

Tora Tora PressMeet Gallery