` ಕಿರುತೆರೆಯನ್ನು  ಬಿಡಲಾರೆ - ಡಿಂಪಲ್ ಕ್ವೀನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rachitha shares her small screen experience
Rachitha Ram Image

ರಚಿತಾ ರಾಮ್. ಡಿಂಪಲ್ ಕ್ವೀನ್ ಎಂದೇ ಕರೆಸಿಕೊಳ್ಳುವ ಈ ಹುಡುಗಿ ಸದ್ಯಕ್ಕೆ ಫುಲ್ ಡಿಮ್ಯಾಂಡ್‍ನಲ್ಲಿದ್ದಾರೆ. ಇದರ ನಡುವೆಯೇ ರಿಯಾಲಿಟಿ ಶೋವೊಂದನ್ನು ಒಪ್ಪಿಕೊಂಡಿರುವ ರಚಿತಾ, ತಮ್ಮ ಕಿರುತೆರೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನಾನು ಬೆಳ್ಳಿತೆರೆಗೆ ಬಂದಿದ್ದೇ ಕಿರುತೆರೆ ಮೂಲಕ. ಅರಸಿ ಧಾರಾವಾಹಿಯಲ್ಲಿ ನಟಿಸುವಾಗ, ಬುಲ್‍ಬುಲ್ ಅವಕಾಶ ಸಿಕ್ಕಿತು ಎನ್ನುವ ರಚಿತಾ, ಯಾವುದೇ ಕಾರಣಕ್ಕೂ ಕಿರುತೆರೆ ಬಿಡುವುದಿಲ್ಲ ಎನ್ನುತ್ತಾರೆ. ಒಳ್ಳೆಯ ಅವಕಾಶಗಳು ಬಂದರೆ, ಕಿರುತೆರೆಗೆ ಹೋಗಲು ಸದಾ ಸಿದ್ಧ ಎನ್ನುವ ರಚಿತಾಗೆ, ರಿಯಾಲಿಟಿ ಶೋ ಕೂಡಾ ಹೊಸದಲ್ಲ. ಈ ಹಿಂದೆ  ಶಿವರಾಜ್ ಕುಮಾರ್ ಜೊತೆ ಡ್ಯಾನ್ಸ್ ಶೋ ಜಡ್ಜ್ ಆಗಿದ್ದ ಅನುಭವವಿದೆ. ಈ ಬಾರಿ ಕಾಮಿಡಿ ಶೋ, ಸೃಜನ್ ಲೋಕೇಶ್ ಜೊತೆ.

Athiratha Movie Gallery

Rightbanner02_smuggler_inside

Uppu Huli Khara Movie Gallery