` ಹೌರಾ ಬ್ರಿಡ್ಜ್‍ನ್ನೇ ಕತ್ತರಿಸಿದ ಪ್ರಿಯಾಂಕಾ ಉಪೇಂದ್ರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
priyanka upendra
Priyanka Upendra Birthday Special

ಮೊನ್ನೆಯೆಲ್ಲ ಸಂಪೂರ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಪ್ರಿಯಾಂಕಾ ಉಪೇಂದ್ರ, ಅದೇ ಖುಷಿಯಲ್ಲಿ ಹೌರಾ ಬ್ರಿಡ್ಜ್‍ನ್ನೇ ಕತ್ತರಿಸಿಬಿಟ್ಟಿದ್ದಾರೆ..ಅಲ್ಲಲ್ಲ.. ಹೌರಾ ಬ್ರಿಡ್ಜ್ ಸೇತುವೆ ಮಾದರಿಯಲ್ಲಿದ್ದ ಕೇಕ್ ಕತ್ತರಿಸಿದ್ದಾರೆ. ಅದು ಪ್ರಿಯಾಂಕಾ ಬರ್ತ್‍ಡೇಗಾಗಿ ಹೌರಾ ಬ್ರಿಡ್ಜ್ ಚಿತ್ರತಂಡ ರೂಪಿಸಿದ್ದ ವಿಭಿನ್ನವಾದ ಕೇಕ್.

ಇನ್ನು ಈ ಬಾರಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಟಿ ಭಾರತಿ ವಿಷ್ಣುವರ್ಧನ್, ಸುಮಲತಾ ಅಂಬರೀಷ್, ವಿಜಯ್ ರಾಘವೇಂದ್ರ, ಗುರುಕಿರಣ್, ಅಮೂಲ್ಯ, ಜಗದೀಶ್, ಯಶ್ ಅವರ ತಾಯಿ ಪುಷ್ಪ, ತಂಗಿ ನಂದಿನಿ ಸೇರಿದಂತೆ ಸೆಲಬ್ರಿಟಿಗಳ ದಂಡೇ ಭಾಗವಹಿಸಿತ್ತು. ಹುಟ್ಟುಹಬ್ಬದ ಸಂಭ್ರಮ ಕೇವಲ ಪಾರ್ಟಿಗಷ್ಟೇ ಸೀಮಿತವಾಗಿರಲಿಲ್ಲ. ಬಾಸ್ಕೋ ಕೇಂದ್ರದಲ್ಲಿ ನೂರಾರು ಮಕ್ಕಳಿಗೆ ಊಟದ ವ್ಯವಸ್ಥೆ ಮತ್ತಿತರ ಸೇವೆಗಳೂ ಇದ್ದವು. 

Athiratha Movie Gallery

Rightbanner02_smuggler_inside

Uppu Huli Khara Movie Gallery