` ಸಾಯಿಕುಮಾರ್‍ಗೆ ಶಿವರಾಜ್ ಕುಮಾರ್ ಡ್ಯೂಪ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna was dupe for sai kumar
Shivarajkumar, Sai Kumar Image

ಎಕೆ-47. ಶಿವರಾಜ್ ಕುಮಾರ್ ಅಭಿನಯದ 50ನೇ ಚಿತ್ರ. ಕನ್ನಡದಲ್ಲಿ ಆಗಿನ ಕಾಲಕ್ಕೇ ದುಬಾರಿ ಬಜೆಟ್‍ನ ಅದ್ದೂರಿ ಚಿತ್ರ. ಕೋಟಿ ರಾಮು ನಿರ್ಮಾಣದ ಆ ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಿಸಲಾಗಿತ್ತು. ಕನ್ನಡದಲ್ಲಿ ಶಿವರಾಜ್ ಕುಮಾರ್ ಹೀರೋ. ತೆಲುಗಿನಲ್ಲಿ ಸಾಯಿಕುಮಾರ್ ಹೀರೋ.

ಆದರೆ, ಆ ಚಿತ್ರದಲ್ಲಿನ ಒಂದು ಕುತೂಹಲಕಾರಿ ವಿಷಯವೊಂದನ್ನು ಸ್ವತಃ ಸಾಯಿಕುಮಾರ್ ಬಿಚ್ಚಿಟ್ಟಿದ್ದಾರೆ.  ತೆಲುಗು ಎಕೆ-47 ಶೂಟಿಂಗ್ ವೇಳೆ, ಸಾಯಿಕುಮಾರ್ ಡ್ಯೂಪ್ ಬಂದಿರಲಿಲ್ಲವಂತೆ. ಸಾಹಸ ದೃಶ್ಯಗಳು ಅಪಾಯಕಾರಿಯಾಗಿದ್ದವು. ಆ ದೃಶ್ಯಗಳಲ್ಲಿ ನಟಿಸಲು ಸಾಯಿಕುಮಾರ್‍ಗೆ ಸಾಧ್ಯವಾಗಲಿಲ್ಲ. ಪಕ್ಕದಲ್ಲೇ ಕನ್ನಡ ಎಕೆ-47 ಶೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ಮುಗಿಸಿ ಬಂದ ಶಿವಣ್ಣ, ಸ್ವತಃ ಸಾಯಿಕುಮಾರ್‍ಗೆ ಡ್ಯೂಪ್ ಆಗಿ ನಟಿಸಿದರಂತೆ. 

ಶಿವಣ್ಣನ ಎನರ್ಜಿ ನೋಡಿ ಆಗಲೇ ಬೆರಗಾಗಿಬಿಟ್ಟಿದ್ದೆ. ಎಂಥದ್ದೇ ಸಾಹಸ ಸನ್ನಿವೇಶದಲ್ಲೂ ಸಲೀಸಾಗಿ ಧೈರ್ಯವಾಗಿ ನಟಿಸುವ ಕಲಾವಿದ ಶಿವರಾಜ್ ಕುಮಾರ್ ಎಂದು ನೆನಪಿಸಿಕೊಂಡಿದ್ದಾರೆ ಸಾಯಿಕುಮಾರ್.

Athiratha Movie Gallery

Rightbanner02_smuggler_inside

Uppu Huli Khara Movie Gallery