` ಪ್ರೇಮ-ಕಾಮ, ಧರ್ಮ-ಕರ್ಮ.. ದಯವಿಟ್ಟು ಗಮನಿಸಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dayavittu gamanisi image
Dayavittu Gamanisi Movie Image

ದಯವಿಟ್ಟು ಗಮನಿಸಿ ಎಂಬ ವಿಶೇಷ ಟೈಟಲ್‍ನ ಸಿನಿಮಾದ ಟೈಟಲ್ ಮತ್ತು ಹಾಡುಗಳನ್ನು ನೋಡಿದವರಿಗೆ ಅನ್ನಿಸುತ್ತಿರುವುದು ಇದು. ಚಿತ್ರದಲ್ಲಿ ಪ್ರೇಮ-ಕಾಮ, ಧರ್ಮ-ಕರ್ಮದ ಕತೆಯಿದೆಯಂತೆ. ಚಿತ್ರದ ಟ್ರೇಲರ್ ಮತ್ತು ಹಾಡುಗಳಲ್ಲಿ ಆ ವಿಭಿನ್ನತೆಯಿದೆ.

ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ, ಮೇಘನಾ ರಾಜ್ ಬರುವ ಟ್ರೇಲರ್‍ನಲ್ಲಿ ಕಾಣಿಸೋದು ಕರ್ಮ ಮತ್ತು ಪ್ರೇಮ. ರಘು ಮುಖರ್ಜಿ, ಸಂಯುಕ್ತಾ ಹೊರನಾಡು ಇರುವ ಟ್ರೇಲರ್‍ನಲ್ಲಿ ಕಾಣಿಸೋದು ಪ್ರೇಮ ಮತ್ತು ಕಾಮ.

ವಸಿಷ್ಟ ಸಿಂಹ ಬರುವ ಟ್ರೇಲರ್‍ನಲ್ಲಿ ಪ್ರೇಮವಷ್ಟೇ ಕಾಣಿಸಿದರೆ, ಇನ್ನೊಂದು ಟ್ರೇಲರ್‍ನಲ್ಲಿ ಧರ್ಮವೇ ಮೈತಳೆದು ನಿಂತಿದೆ. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರ ಬಿಡುಗಡೆಗೆ ಮುನ್ನವೇ ವಿಚಿತ್ರ ಕುತೂಹಲ ಹುಟ್ಟಿಸಿದ್ದು ಈ ಕಾರಣಕ್ಕೆ. ಈಗ ಚಿತ್ರ ಥಿಯೇಟರಿನಲ್ಲಿದೆ. ದಯವಿಟ್ಟು ಗಮನಿಸಿ.

Smuggler Movie Gallery

Rightbanner02_smuggler_inside

Uppu Huli Khara Movie Gallery