` ಶಿವಣ್ಣ, ಕುಮಾರಣ್ಣ ಭೇಟಿ ರಾಜಕಾರಣ ಅಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar clarifies hdk visit
Shivarajkumar, HD Kumaraswamy image

ಶಿವರಾಜ್ ಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಫೋಟೋ ಚಿತ್ರರಂಗ ಹಾಗೂ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಶಿವರಾಜ್ ಕುಮಾರ್ ರಾಜಕೀಯಕ್ಕೆ ಬರ್ತಾರಾ..? ಜೆಡಿಎಸ್‍ನಿಂದ ಕಣಕ್ಕಿಳೀತಾರಾ..? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದ್ದವು. ಅದಕ್ಕೆ ಕಾರಣವೂ ಇತ್ತು. 

ಶಿವರಾಜ್ ಕುಮಾರ್‍ಗೆ ರಾಜಕೀಯ ಹೊಸದಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪತ್ನಿ ಗೀತಾ ಹಾಗೂ ಬಾಮೈದ ಮಧು ಬಂಗಾರಪ್ಪ ಪರವಾಗಿ ಪ್ರಚಾರ ಮಾಡಿದ್ದರು. ಗೀತಾ ಸೋತಿದ್ದರು. ಮಧು ಬಂಗಾರಪ್ಪ ಗೆದ್ದು ಶಾಸಕರಾಗಿದ್ದರು. ಮಧು ಬಂಗಾರಪ್ಪ ಈಗಲೂ ದೇವೇಗೌಡ, ಕುಮಾರಸ್ವಾಮಿ ಆಪ್ತರಲ್ಲಿ ಒಬ್ಬರು. ಶಿವರಾಜ್ ಕುಮಾರ್-ಹೆಚ್‍ಡಿಕೆ ಭೇಟಿ ವೇಳೆ ಮಧು ಬಂಗಾರಪ್ಪ ಕೂಡಾ ಇದ್ದರು. ಹೀಗಾಗಿ ಸುದ್ದಿಗೆ ದೊಡ್ಡ ಬಲ ಬಂದಿದೆ.

ಆದರೆ, ಆ ಎಲ್ಲ ಸುದ್ದಿಗಳಿಗೆ ಸ್ವತಃ ತೆರೆ ಎಳೆದಿದ್ದಾರೆ ಶಿವರಾಜ್ ಕುಮಾರ್. ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಲು ಹೋಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ಆರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯಲ್ಲಿ ಆರೋಗ್ಯದ ಕಡೆ ಗಮನ ಕೊಡಿ, ರಾಜ್ಯ ಪ್ರವಾಸ ನಿಧಾನವಾಗಿ ಮಾಡಿ ಎಂದು ಹೇಳಿದ್ದೇನೆ. ರಾಜಕೀಯದ ಮಾತುಕತೆ ನಡೆದಿಲ್ಲ ಎಂದಿದ್ದಾರೆ ಶಿವಣ್ಣ. 

 

Raju Kannada Medium PromoLaunch Gallery

https://www.chitraloka.com/movie-reviews/15441-mugulunage-movie-review-chitraloka-rating-4-5.html

Satya Harishchandra PressMeet Gallery