` ಇಡ್ಲಿವಡೆಗಾಗಿ ಮಲ್ಲೇಶ್ವರಂಗೆ ಬಂದಿದ್ದರಂತೆ ದೀಪಿಕಾ ಪಡುಕೋಣೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
deepika padukone
Deepika Padukone In Bengaluru

ದೀಪಿಕಾ ಪಡುಕೋಣೆಯ ಚಿತ್ರಯಾತ್ರೆ ಶುರುವಾಗಿದ್ದು ಕನ್ನಡದಿಂದಲೇ ಆದರೂ, ಈಗ ಕನ್ನಡ ಚಿತ್ರಗಳ ಕೈಗೆ ಎಟುಕದಷ್ಟು ಎತ್ತರಕ್ಕೆ ಬೆಳೆದಿದ್ದಾರೆ ದೀಪಿಕಾ ಪಡುಕೋಣೆ. ಬಾಲಿವುಡ್​ನ ಸ್ಟಾರ್​ ನಟಿಯಾಗಿರುವ ದೀಪಿಕಾ, ಮೂಲತಃ ಬೆಂಗಳೂರಿನವರೇ. 

ದೀಪಿಕಾ ಪಡುಕೋಣೆ ಅವರ ಒಂದು ಫೋಟೋ ವೈರಲ್ ಆಗಿದೆ. ಅದು ಬೆಂಗಳೂರಿನ ಮಲೇಶ್ವರಂ ನಲ್ಲಿರೋ ವೀಣಾ ಸ್ಟೋರ್  ಮಾಲೀಕರ ಜೊತೆ ದೀಪಿಕಾ ಪಡುಕೋಣೆ ಇದ್ದ ಫೋಟೋ. ಏನು ವಿಷಯ ಎಂದು ಕೆದಕಿದಾಗ ಗೊತ್ತಾಗಿದ್ದು, ದೀಪಿಕಾ ಬೆಳ್ಳಂಬೆಳಗ್ಗೆ ಆರೂಮೂವತ್ತಕ್ಕೆಲ್ಲ ಇವರ ಹೋಟೆಲ್​ಗೆ ಬಂದು ಇಡ್ಲಿ ವಡೆ ತಿಂದು ಹೋಗಿದ್ದಾರೆ. 

ಅದೇ ಖುಷಿಯಲ್ಲಿ ಮಾಲೀಕ ಪ್ರದೀಪ್ ಜೊತೆ ಒಂದು ಸೆಲ್ಫಿಗೆ ಫೋಸ್ ಕೊಟ್ಟು ಹೋಗಿದ್ದಾರೆ. ಬೆಂಗಳೂರಿನಲ್ಲಿದ್ದಾಗ ಆಗಾಗ್ಗೆ ಇಲ್ಲಿಗೆ ಬರುತ್ತಿರುತ್ತಾರೆ ಎಂದು ಹೇಳಿದ್ದಾರೆ ಪ್ರದೀಪ್.

Athiratha Movie Gallery

Rightbanner02_smuggler_inside

Uppu Huli Khara Movie Gallery