` ಪ್ರಿಯಾಮಣಿ ಸಿಂಪಲ್ಲಾಗಿ ರಿಜಿಸ್ಟರ್ ಮದುವೆ ಆದ್ರು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
priyamani marriage story
Priyamani married to Mustafa Raj

ಪಂಚಭಾಷಾ ನಟಿ ಪ್ರಿಯಾಮಣಿ ತಮ್ಮ ಬಹುಕಾಲದ ಗೆಳೆಯ ಮುಸ್ತಫಾ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜಯನಗರದ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಪ್ರಿಯಾಮಣಿ ಮುಸ್ತಫಾ ಸತಿಪತಿಗಳಾಗಿದ್ದಾರೆ.

ಬನಶಂಕರಿಯ ಮನೆಯಿಂದ ಒಂದೇ ಕಾರಿನಲ್ಲಿ ಬಂದ ಪ್ರಿಯಾಮಣಿ ಮತ್ತು ಮುಸ್ತಫಾ, ಮಧ್ಯಾಹ್ನ 3.30ರ ವೇಳೆಗೆ ವಿವಾಹವಾದರು. ಕೇರಳ ಸಂಪ್ರದಾಯದಂತೆ ಹಸಿರು ಸೀರೆಯುಟ್ಟಿದ್ದ ಪ್ರಿಯಾಮಣಿ, ಬಿಳಿ ಬಣ್ಣದ ಕುರ್ತಾ ಧರಿಸಿದ್ದ ಮುಸ್ತಫಾ, ಮದುವೆಗೆ ಸಿದ್ಧರಾಗಿ ಬಂದಿದ್ದರು. 

ಮದುವೆಗೆ ಪ್ರಿಯಾ ಅವರ ತಂದೆ ವಾಸುದೇವ್ ಮಣಿ ಅಯ್ಯರ್ ಹಾಗೂ ಮುಸ್ತಫಾ ಕುಟುಂಬದ ಕೆಲವೇ ಸದಸ್ಯರು ಹಾಜರಿದ್ದರು. ಪ್ರಿಯಾಮಣಿ ಅವರ ಕೈ ಹಿಡಿದಿರುವ ಮುಸ್ತಫಾ ರಾಜ್ ಬ್ಯುಸಿನೆಸ್ ಮ್ಯಾನ್. ಮುಂಬೈನವರು. ಸಿಸಿಎಲ್ ಹುಟ್ಟು ಹಾಕಿದವರಲ್ಲಿ ಮುಸ್ತಫಾ ಕೂಡಾ ಒಬ್ಬರು.

Related Articles :-

ಇದೇ 23ಕ್ಕೆ ಮದುವೆ - ದಯವಿಟ್ಟು ಯಾರು ಬರಬೇಡಿ - ಪ್ರಿಯಾಮಣಿ

ಪ್ರಿಯಾಮಣಿ ಮದುವೆ ಡೇಟ್ ಫಿಕ್ಸ್ 

Birthday Special - Upendra Gallery

https://www.chitraloka.com/movie-reviews/15441-mugulunage-movie-review-chitraloka-rating-4-5.html

Birthday Special - Actress Shruthi Gallery