` ಇದೇ 23ಕ್ಕೆ ಮದುವೆ - ದಯವಿಟ್ಟು ಯಾರು ಬರಬೇಡಿ - ಪ್ರಿಯಾಮಣಿ - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
priyamani marriage date f
priyamani, mustafa image

ಪಂಚಭಾಷಾ ನಟಿ ಪ್ರಿಯಾಮಣಿ ಹಸೆಮಣೆ ಏರುತ್ತಿದ್ದಾರೆ. ಆಗಸ್ಟ್ 23ರಂದು ಗೆಳೆಯ, ಉದ್ಯಮಿ ಮುಸ್ತಫಾ ಜೊತೆ ಮದುವೆಯಾಗುತ್ತಿದ್ದಾರೆ. ಆದರೆ ಬೆರಗು ಹುಟ್ಟಿಸಿರುವುದು ಪ್ರಿಯಾಮಣಿ ಅವರ ಸಂದೇಶ.

ಎಲ್ಲರೂ ಮದುವೆಗೆ ಆಹ್ವಾನ ಪತ್ರಿಕೆ ಕೊಟ್ಟು, ಕುಟುಂಬ ಸಮೇತರಾಗಿ ಮದುವೆಗೆ ಬರಬೇಕು ಎಂದರೆ, ಪ್ರಿಯಾಮಣಿ ಮಾತ್ರ, ಮದುವೆ ಖಾಸಗಿ ಸಮಾರಂಭ. ಇದರಲ್ಲಿ ಎರಡೂ ಕಡೆಯ ಕುಟುಂಬದವರು, ಆತ್ಮೀಯ ಮಿತ್ರರಷ್ಟೇ ಇರುತ್ತಾರೆ. ಇದು ನಮ್ಮ ಖಾಸಗಿ ಕಾರ್ಯಕ್ರಮವಾದ ಕಾರಣ, ಸಾರ್ವಜನಿಕರಿಗೆ ಪ್ರವೇಶವಿಲ್ಲ. ದಯವಿಟ್ಟು ಬರಬೇಡಿ. ನಮ್ಮ ಮದುವೆಯ ಫೋಟೋಗಳನ್ನು ನಂತರ ನಾವೇ ಮಾಧ್ಯಮಗಳಿಗೆ ನೀಡುತ್ತೇವೆ ಎಂದಿದ್ದಾರೆ.

ನಿಮ್ಮ ಪ್ರೀತಿ, ಆಶೀರ್ವಾದ ಸದಾ ಇರಲಿ. ದಯವಿಟ್ಟು ನಮ್ಮ ಖಾಸಗಿತನ ಗೌರವಿಸಿ ಎನ್ನುವುದು ಪ್ರಿಯಾಮಣಿ ಮನವಿ.

Related Articles :-

ಪ್ರಿಯಾಮಣಿ ಮದುವೆ ಡೇಟ್ ಫಿಕ್ಸ್ 

Smuggler Movie Gallery

Rightbanner02_smuggler_inside

Uppu Huli Khara Movie Gallery