` ರವಿಚಂದ್ರನ್ ಮಗನಿಗೆ ಹೀರೋಯಿನ್ನೇ ಸಿಗ್ತಿಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
no heroine for ravichandran son
Vikram, Ravichandran Image

ಕ್ರೇಜಿಸ್ಟಾರ್ ರವಿಚಂದ್ರನ್, ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಾಯಕಿಯರಿಗೆ ಲೆಕ್ಕವೇ ಇಲ್ಲವೇನೋ. ಜ್ಯೂಹಿ, ಖುಷ್‍ಬೂ, ರಮ್ಯಾಕೃಷ್ಣ, ಮೀನಾ, ರೋಜಾ, ಶಿಲ್ಪಾಶೆಟ್ಟಿ... ಹೀಗೆ ಪಟ್ಟಿ ತುಂಬಾ ಉದ್ದವಿದೆ. ಪರಭಾಷೆಯಲ್ಲಿ ನಟಿಸುತ್ತಿದ್ದ ನಟಿಯರು ಎಷ್ಟೇ ಖ್ಯಾತರಾಗಿದ್ದರೂ, ರವಿಚಂದ್ರನ್ ಚಿತ್ರಗಳ ಆಫರ್‍ನ್ನು ತಿರಸ್ಕರಿಸುತ್ತಿರಲಿಲ್ಲ. ರವಿಚಂದ್ರನ್ ಚಿತ್ರಗಳಲ್ಲಿ ನಾಯಕಿಯರ ನಿಜವಾದ ಸೌಂದರ್ಯ ಅನಾವರಣಗೊಳ್ಳುತ್ತಿತ್ತು. ಹೀಗೆ ಕನ್ನಡ ಚಿತ್ರರಂಗಕ್ಕೆ ಹಲವಾರು ನಾಯಕಿಯರನ್ನು ಪರಿಚಯಿಸಿದ ರವಿಚಂದ್ರನ್ ಮಗನಿಗೆ ಈಗ ನಾಯಕಿಯರೇ ಸಿಗುತ್ತಿಲ್ಲ ಎಂದರೆ ಅಚ್ಚರಿಯಲ್ಲವೇ. ಆದರೆ ಇದು ನಿಜ.

ರವಿಚಂದ್ರನ್‍ರ ಎರಡನೇ ಮಗ ವಿಕ್ರಮ್ ನಟಿಸುತ್ತಿರುವ ನವೆಂಬರ್‍ನಲ್ಲಿ ನಾನು ಅವಳು ಚಿತ್ರಕ್ಕೆ ನಾಯಕಿಯರೇ ಸಿಗುತ್ತಿಲ್ಲವಂತೆ. ಮೊದಲು ಕಥೆ ಕೇಳಿದ್ದ ಕಮಲ್ ಹಾಸನ್ ಮಗಳು ಅಕ್ಷರಾ ಹಾಸನ್, ಈಗ ಡೇಟ್ ಸಮಸ್ಯೆಯಿಂದಾಗಿ ಹಿಂದೆ ಸರಿದಿದ್ದಾರೆ. ತಾಪ್ಸಿ ಪನ್ನು ಡೇಟ್ ಇದೆಯಾದರೂ, ಆಕೆ ವಿಕ್ರಂಗೆ ತೀರಾ ದೊಡ್ಡವರಾಗಿ ಬಿಡುತ್ತಾರೆ. ಹೀಗಾಗಿ ಚಿತ್ರತಂಡ ಈಗ ತಮನ್ನಾ, ಶ್ರದ್ಧಾ ಕಪೂರ್, ಅಲಿಯಾ ಭಟ್ ಹಿಂದೆ ಬಿದ್ದಿದೆಯಂತೆ. ಮಲಯಾಳಂ ನಟಿ ಸಾಯಿ ಪಲ್ಲವಿ ಹೆಸರು ಕೂಡಾ ಕೇಳಿ ಬರುತ್ತಿದೆ. ಯಾವುದೂ ಫೈನಲ್ ಆಗಿಲ್ಲ.

ನವೆಂಬರ್ ಅದ್ಭುತವಾದ ರೊಮ್ಯಾಂಟಿಕ್ ತಿಂಗಳು. ಆ ಒಂದು ತಿಂಗಳಲ್ಲಿ ನಾಯಕ ನಾಯಕಿ ನಡೆಯುವ ರೊಮ್ಯಾಂಟಿಕ್ ಪ್ರೇಮಕಥೆಯೇ ಚಿತ್ರದ ತಿರುಳು. ಹೀಗಾಗಿ ಪಕ್ಕಾ ಕ್ರೇಜಿ ಕ್ವೀನ್‍ನಂತಿರುವ ನಾಯಕಿಯೇ ಬೇಕು ಎಂದು ಕೊಂಡು ಹುಡುಕುತ್ತಿದ್ದಾರೆ ಡೈರೆಕ್ಟರ್ ನಾಗಶೇಖರ್. ಅಲ್ಲದೆ, ಚಿತ್ರ ತೆಲುಗು, ತಮಿಳು, ಮಲಯಾಳಂನಲ್ಲೂ ಬರುತ್ತಿರುವುದರಿಂದ ಎಲ್ಲ ಭಾಷೆಗೂ ಸೂಟ್ ಆಗಬಲ್ಲ ನಾಯಕಿಯ ಹುಡುಕಾಟದಲ್ಲಿದ್ದಾರೆ.

Graana PressMeetgr Gallery

https://www.chitraloka.com/movie-reviews/15083-operation-alamelamma-movie-review-chitraloka-rating-4-5.html

March 22 Movie Gallery