` butteryfly, - chitraloka.com | Kannada Movie News, Reviews | Image

butteryfly,

 • ಬಟರ್ ಫ್ಲೈ ಚಿತ್ರದಿಂದ ಹೊರ ನಡೆದ ಆ್ಯಮಿ ಜಾಕ್ಸನ್

  amy jackson out from butterfly

  ಬಟರ್ ಫ್ಲೈ. ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾ. ಹಿಂದಿಯ ಕ್ವೀನ್ ಚಿತ್ರದ ರೀಮೇಕ್. ಕನ್ನಡದಲ್ಲಿ ಪಾರುಲ್ ಯಾದವ್ ನಾಯಕಿ. ತೆಲುಗಿನಲ್ಲಿ ತಮನ್ನಾ, ತಮಿಳಿನಲ್ಲಿ ಕಾಜಲ್ ಅಗರ್‍ವಾಲ್ ನಟಿಸುತ್ತಿದ್ದಾರೆ. ಇವರೆಲ್ಲರೂ ಆಯಾಯಾ ಭಾಷೆಗಳಲ್ಲಿ ನಿರ್ವಹಿಸುವುದು ಕಂಗನಾ ರಣಾವತ್ ಪಾತ್ರ.

  ಇನ್ನು ಲೀಸಾ ಹೇಡನ್ ನಿರ್ವಹಿಸಿದ್ದ ಪಾತ್ರವನ್ನು ಆ್ಯಮಿ ಜಾಕ್ಸನ್ ಮಾಡಬೇಕಿತ್ತು. ನಾಲ್ಕೂ ಭಾಷೆಗಳಲ್ಲಿ ಅವರೇ ನಟಿಸಬೇಕಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಹಿಂದೆ ಸರಿದಿದ್ದಾರೆ ಆ್ಯಮಿ ಜಾಕ್ಸನ್. ಆ್ಯಮಿ ಜಾಕ್ಸನ್ ಪಾತ್ರಕ್ಕೆ ಈಗ ಇಬ್ಬರು ನಟಿಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ವೀಡನ್ ಚೆಲುವೆ ಎಲಿ ಅಬ್ರಹಾಂ ಹಾಗೂ ಶಿಬಾನಿ ದಾಂಡೇಕರ್. 

  ಪರೂಲ್ ಯಾದವ್ ಕನ್ನಡದಲ್ಲಿ ನಾಯಕಿಯಷ್ಟೇ ಅಲ್ಲ, ಚಿತ್ರದ ನಿರ್ಮಾಪಕಿಯರಲ್ಲಿ ಒಬ್ಬರು. ಚಿತ್ರದ ಶೂಟಿಂಗ್ ಎರಡು ತಿಂಗಳು ಪ್ಯಾರಿಸ್‍ನಲ್ಲೇ ನಡೆಯಲಿದೆ. ನಾಲ್ಕು ಮಂದಿ ನಾಯಕಿಯರು ಒಟ್ಟಿಗೇ ಸೆಟ್‍ನಲ್ಲಿರುವುದು ವಿಶೇಷ ಅನುಭವ ಎಂದಿದ್ದಾರೆ ಪರೂಲ್ ಯಾದವ್.

   

 • ಸ್ವೀಡನ್ ಸುಂದರಿಗೆ ಇಷ್ಟವಾಯ್ತು ಕನ್ನಡ

  sweden beauty elli

  `ಬಟರ್ ಫ್ಲೈ' ಚಿತ್ರದಲ್ಲಿ ಎಲ್ಲಿ ಅವರಾಮ್ ಎಂಬ ಸ್ವೀಡನ್ ನಟಿ ನಟಿಸುತ್ತಿದ್ದಾರೆ. ಚಿತ್ರದ ನಾಯಕಿ ಪರೂಲ್ ಯಾದವ್. ಒರಿಜಿನಲ್ ಕ್ವೀನ್ ಚಿತ್ರದಲ್ಲಿ ಲಿಸಾ ಹೇಡನ್ ನಿರ್ವಹಿಸಿದ್ದ ಪಾತ್ರ ಎಲ್ಲಿ ಅವರದ್ದು. ಭಾರತೀಯ ನಟಿಯರಾದರೆ, ಅಷ್ಟೋ ಇಷ್ಟೋ ಕನ್ನಡ ಕಿವಿಗಾದರೂ ಬಿದ್ದಿರುತ್ತೆ. ಆದರೆ, ಈಕೆ ಸಂಪೂರ್ಣ ವಿದೇಶಿ. ಆದರೆ, ಈಕೆಗೆ ಕನ್ನಡ ತುಂಬಾನೇ ಇಷ್ಟವಾಗಿದೆ. 

  ನಾನು ಯುರೋಪಿಯನ್ ಆದರೂ, ಚಿತ್ರತಂಡ ನನಗೆ ಚೆನ್ನಾಗಿ ಕನ್ನಡ ಕಲಿಸುತ್ತಿದೆ. ನನಗೆ ಬೆಂಗಳೂರಿನಲ್ಲಿರುವ ಫೀಲ್ ಆಗುತ್ತಿದೆ ಎಂದಿದ್ದಾರೆ ಎಲ್ಲಿ. ಕನ್ನಡದಲ್ಲಿ ಪುನೀತ್ ರಾಜ್‍ಕುಮಾರ್ ಬಗ್ಗೆ ಕೇಳಿತಿಳಿದುಕೊಂಡಿದ್ದಾರೆ. ಪುನೀತ್ ಡ್ಯಾನ್ಸ್ ಇಷ್ಟವಾಗಿದೆ. ಬಾಹುಬಲಿ ಅವರ ಫೇವರಿಟ್ ಚಿತ್ರವಂತೆ. ರಜಿನಿಕಾಂತ್ ಅವರ ಕಾಲಾ ಚಿತ್ರವನ್ನು ಕಾಯುತ್ತಿದ್ದೇನೆ ಎನ್ನುವ ಎಲ್ಲಿಗೆ, ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸುವ ಆಸಕ್ತಿಯಿದೆ.

Smuggler Movie Gallery

Rightbanner02_smuggler_inside

Uppu Huli Khara Movie Gallery