` bruhaspathi, - chitraloka.com | Kannada Movie News, Reviews | Image

bruhaspathi,

  • 3 Gante 30 Dina 30 Second To Replace Brihaspathi

    3 gante to replace bruhaspathi

    Aru Gowda starrer '3 Gante 30 Dhina 30 Second' is all set to be released on the 19th of January. The film will be replacing Manoranjan starrer 'Brihaspathi' in Anupama and the film will be releasing in more than 100 theaters across Karnataka.

    '3 Gante 30 Dhina 30 Second' is being produced by Brain Share Creations Private Limited and is directed by G K Madhusudhan. The film stars Aru Gowda, Kavya Shetty, Devaraj, Sudharani, Yamuna Srinidhi, Sundar and others in prominent roles. 

    Srinivas Ramaiah is the cameraman, while Sridhar Sambhram is the music director.

  • S/O ರವಿಚಂದ್ರನ್ ವಿಐಪಿ ಅಲ್ಲ, ಬೃಹಸ್ಪತಿ

    brihaspathi movie image

    ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ ಹೊಸ ಚಿತ್ರದ ಟೈಟಲ್ ಮತ್ತೊಮ್ಮೆ ಬದಲಾಗಿದೆ. ತಮಿಳಿನ ವಿಐಪಿ ಚಿತ್ರದ ರೀಮೇಕ್ ಆಗಿದ್ದ ಈ ಚಿತ್ರಕ್ಕೆ ಮೊದಲು ಇಟ್ಟಿದ್ದ ಹೆಸರು ವಿಐಪಿ. ನಂತರ, ಅದನ್ನು ಬದಲಾಯಿಸಿ S/O  ರವಿಚಂದ್ರನ್ ಎಂದಿಡಲಾಗಿತ್ತು. ಈಗ ಅದೇ ಚಿತ್ರದ ಟೈಟಲ್ ಮತ್ತೊಮ್ಮೆ ಬದಲಾಗಿದೆ. ಈಗ ಚಿತ್ರದ ಹೆಸರು ಬೃಹಸ್ಪತಿ.

    ಸಾಹೇಬದ ಸಾಫ್ಟ್ ಲುಕ್‍ಗೂ, ಬೃಹಸ್ಪತಿಯ ರಗಡ್ ಲುಕ್‍ಗೂ ಭಾರಿ ವ್ಯತ್ಯಾಸವಿದೆ. ಚಿತ್ರದ ನಿರ್ದೇಶಕ ನಂದಕಿಶೋರ್. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದೆ. ಚಿತ್ರದಲ್ಲಿ ರವಿಚಂದ್ರನ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸಾಯಿಕುಮಾರ್. ಮಿಷ್ಠಿ ಎಂಬ ಬಾಲಿವುಡ್ ಹುಡುಗಿ, ಈ ಚಿತ್ರದ ನಾಯಕಿ. ಕೆಲವೇ ದಿನಗಳಲ್ಲಿ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಲಿದೆ.

    Related Articles :-

    Manoranjan's Film Titled As Brihaspathi

  • ರವಿಚಂದ್ರನ್ ಪುತ್ರ ಹೀರೋ.. ರಾಕ್‍ಲೈನ್ ನಿರ್ಮಪಕ

    manoranjan, ravichandran at bruhaspathi audio kaunch

    ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಬೃಹಸ್ಪತಿ ಚಿತ್ರ ತೆರೆಗೆ ಬರುತ್ತಿದೆ. ಮುಂದಿನ ವರ್ಷದ ಜನವರಿ ಮೊದಲ ವಾರದಲ್ಲೇ ಮನೋರಂಜನ್, ಬೃಹಸ್ಪತಿಯಾಗಿ ಟಾಕೀಸ್ ಟಾಕೀಸ್‍ಗಳಲ್ಲಿ ದರ್ಶನ ಕೊಡಲಿದ್ದಾರೆ.

    ಚಿತ್ರದ ವಿಶೇಷವೇನು ಗೊತ್ತಾ..? ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ತಮಿಳು, ತೆಲುಗು,  ಹಿಂದಿಯಲ್ಲಿ ಬಿಗ್ ಬಜೆಟ್ ಸಿನಿಮಾಕ್ಕಿಳಿದು ಗೆದ್ದ ರಾಕ್‍ಲೈನ್, ಕನ್ನಡ ಚಿತ್ರರಂಗವನ್ನು ಬಿಟ್ಟರಾ ಎಂಬ ಅಭಿಮಾನಿಗಳ ಪ್ರಶ್ನೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಉತ್ತರ ಕೊಟ್ಟಿದ್ದಾರೆ ರಾಕ್‍ಲೈನ್.

    ಈಗ ವಿಶೇಷ ವಿಷಯಕ್ಕೆ ಬರೋಣ. ರಾಕ್‍ಲೈನ್ ವೆಂಕಟೇಶ್, ನಟ ರವಿಚಂದ್ರನ್ ಆಪ್ತಮಿತ್ರರಲ್ಲಿ ಒಬ್ಬರು. ರವಿಚಂದ್ರನ್ ಅಭಿನಯದ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದ ರಾಕ್‍ಲೈನ್ ವೆಂಕಟೇಶ್, ಈಗ ಅವರ ಮಗನ ಚಿತ್ರವನ್ನೂ ನಿರ್ಮಿಸಿದ್ದಾರೆ. ರಾಕ್‍ಲೈನ್-ರವಿಚಂದ್ರನ್ ಜೋಡಿಗೆ ಸಿಕ್ಕಂಥ ಯಶಸ್ಸು, ರಾಕ್‍ಲೈನ್-ಮನೋರಂಜನ್ ಜೋಡಿಗೂ ಸಿಗಲಿ.

    ಚಿತ್ರಕ್ಕೆ ನಂದಕಿಶೋರ್ ನಿರ್ದೇಶಕ. ಮಿಶ್ತಿ ಚಕ್ರವರ್ತಿ ನಾಯಕಿ. ಇನ್ನು ರವಿಚಂದ್ರನ್ ಅವರ ಗರಡಿಯಲ್ಲೇ ಇದ್ದ ಹರಿಕೃಷ್ಣ ಮ್ಯೂಸಿಕ್ ಡೈರೆಕ್ಟರ್. ಸಿತಾರಾ, ಅವಿನಾಶ್, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲ್ ಮೊದಲಾದವರು ನಟಿಸಿರುವ ಸಿನಿಮಾ, ತಮಿಳಿನ ವಿಐಪಿ ಚಿತ್ರದ ರೀಮೇಕ್. 

Raju Kannada Medium Movie Gallery

Choorikatte Movie Gallery