` pm modi fund, - chitraloka.com | Kannada Movie News, Reviews | Image

pm modi fund,

  • ಮಾತು ತಪ್ಪದ ಪ್ರಥಮ್ - ಪ್ರಧಾನಿ ಪರಿಹಾರ ನಿಧಿಗೆ ಬಿಗ್ ದಾನ

    pratham donates 10 lakhs

    ಬಿಗ್‍ಬಾಸ್ ಪ್ರಥಮ್ ಕೊನೆಗೂ ನುಡಿದಂತೆ ನಡೆದುಕೊಂಡಿದ್ದಾರೆ. ಬಿಗ್‍ಬಾಸ್ ಸ್ಪರ್ಧೆ ಗೆದ್ದಾಗಲೇ ಬಹುಮಾನದ ಹಣದಲ್ಲಿ ರೈತರಿಗಿಷ್ಟು, ಸೈನಿಕರಿಗಿಷ್ಟು, ಊರಿಗೆ ಇಷ್ಟು ಎಂದು ಹಂಚಿದ್ದ ಪ್ರಥಮ್, ಈಗ 10 ಲಕ್ಷ ರೂ. ಹಣವನ್ನು ಪ್ರಧಾನಮಂತ್ರಿಗಳಿಗೇ ಹಸ್ತಾಂತರಿಸಿದ್ದಾರೆ.

    ನವದೆಹಲಿಗೆ ಹೋಗಿ, ಪ್ರಧಾನಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ. ಚೆಕ್ ಹಸ್ತಾಂತರಿಸಿ ಬಂದಿದ್ದಾರೆ. ಯೋಧರ ಕಲ್ಯಾಣಕ್ಕಾಗಿ ಈ ಹಣ ನೀಡುತ್ತಿದ್ದೇನೆ. ಯೋಧರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರ ನಿಧಿಗೇ ಹಣ ನೀಡಿದ್ದೇನೆ ಎಂದಿದ್ದಾರೆ ಪ್ರಥಮ್.

#

Smuggler Release Meet Gallery

Rightbanner02_tora_inside

Tora Tora PressMeet Gallery