` rambo 2, - chitraloka.com | Kannada Movie News, Reviews | Image

rambo 2,

 • Sharan's 'Rambo 2' Release in February

  sharan in rambo 2

  Actor Sharan's film 'Rambo 2', which is being directed by Anil Kumar is almost complete and the film is all set to release in the month of February.

  'Rambo 2' is being produced by Sharan and Atlanta Nagendra under the Laddoo Films banner. The film is being co-produced by technicians and music composer Arjun Janya, cinematographer Sudhakar Raj, editor K M Prakash will be working partners for the film. One of the highlights of the film is, Arun Sagar's daughter has sung a song for this film.

  'Rambo 2' stars Sharan, Ashika, Chikkanna and others in prominent roles.

   

   

 • Sharan's Film Titled As Rambo 2

  sharan's nw film titled rambo 2

  Actor Sharan's film which is being directed by Anil Kumar has been titled as 'Rambo 2' and the film will be launched next week.

  'Rambo 2' is being produced by Sharan and Atlanta Nagendra under the Laddoo Films banner. The film is being co-produced by technicians and music composer Arjun Janya, cinematographer Sudhakar Raj, editor K M Prakash will be working partners for the film.

  As of now the search for heroine is one and is likely to be finalized soon.

  Related Articles :-

  Atlanta Nagendra Movie With Sharan

 • ಅರುಣ್ ಸಾಗರ್ ಮಗಳು ಈಗ ಸಿಂಗರ್

  arun sagar's daughter now singer

  ಅರುಣ್ ಸಾಗರ್, ನಟ, ನಿರ್ದೇಶಕ, ಕಲಾ ನಿರ್ದೇಶಕ. ಚಿತ್ರರಂಗದಲ್ಲಿ ಒಂದರ್ಥದಲ್ಲಿ ಅರುಣ್ ಸಾಗರ್ ಸಕಲಕಲಾವಲ್ಲಭ. ಅವರ ಮಗಳೀಗ ಗಾಯಕಿಯಾಗುತ್ತಿದ್ದಾರೆ. ಶರಣ್ ಅಭಿನಯದ ರ್ಯಾಂಬೋ ಚಿತ್ರದಲ್ಲಿ ಶರಣ್ ಪುತ್ರಿ ಆದಿತಿ, ಹಾಡು ಹಾಡಿದ್ದಾರೆ. ಅವರಿಗಿನ್ನೂ 15 ವರ್ಷ ಎನ್ನುವುದು ವಿಶೇಷ. ಧಮ್ ಮಾರೋ ಧಮ್.. ಎಂಬ ಹಾಡನ್ನು ಆದಿತಿ ಅವರಿಂದ ಹಾಡಿಸಿರುವುದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ. 

  ಶರಣ್ ಅಭಿನಯದ ಈ ಚಿತ್ರಕ್ಕೆ ದಿಲ್‍ವಾಲ ಅನಿಲ್ ನಿರ್ದೇಶನವಿದೆ. ಚಿತ್ರದ ನಿರ್ಮಾಪಕರು ಯಾರು ಎಂದರೆ, ಪಟ್ಟಿ ದೊಡ್ಡದಾಗಿದೆ. ಅಟ್ಲಾಂಟಾ ನಾಗೇಂದ್ರ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಛಾಯಾಗ್ರಹಕ ಸುಧಾಕರ್ ರಾಜ್, ಸಂಕಲನಕಾರ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಕ್ರಿಯೇಟಿವ್ ಹೆಡ್ ತರುಣ್ ಸುಧೀರ್.. ಹೀಗೆ ಎಲ್ಲ ತಂತ್ರಜ್ಞರೂ ನಿರ್ಮಾಪಕರೇ. ಬಂದ ಲಾಭದಲ್ಲಿ ಎಲ್ಲರಿಗೂ ಶೇರ್ ಸಿಗಲಿದೆ.

 • ಆಶಿಕಾ ಸಿಕ್ಕಾಪಟ್ಟೆ ಹಾಟ್ ಹಾಟ್..

  ashika ranganath in rambo 2

  ಆಶಿಕಾ ರಂಗನಾಥ್. ಮುಗುಳುನಗೆ ಚಿತ್ರದ ಮೂಲಕ ಗಮನ ಸೆಳೆದ ಚೆಲುವೆ. ಕ್ರೇಜಿಬಾಯ್ ಚಿತ್ರದಲ್ಲಿಯೂ ನಟಿಸಿದ್ದ ಆಶಿಕಾಗೆ ಹೆಸರು ತಂದುಕೊಟ್ಟಿದ್ದು ಮುಗುಳುನಗೆ. ಎರಡೂ ಸಿನಿಮಾಗಳಲ್ಲಿ ಸ್ವಲ್ಪ ಗ್ಲಾಮರಸ್ ಆಗಿ ಕಾಣಿಸಿದ್ದರೂ, ಕ್ಯೂಟ್ ಬೇಬಿಯಂತೆ ಕಂಗೊಳಿಸಿದ್ದರು. ಹೀಗಿದ್ದ ಆಶಿಕಾ ರಂಗನಾಥ್, Rambo 2 ಚಿತ್ರದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರಂತೆ.

  ಹುಡುಗರ ಜೊತೆ ಹೆಚ್ಚಾಗಿ ಮಿಂಗಲ್ ಹಾಗುವ, ಫಾಸ್ಟ್ ಪಾರ್ವರ್ಡ್ ನೇಚರ್ ಹುಡುಗಿಯಾಗಿ ನಟಿಸಿರುವ ಆಶಿಕಾ, ಆ ಪಾತ್ರ ಯುವತಿಯರಿಗಿಂತ ಯುವಕರಿಗೇ ಹೆಚ್ಚು ಕನೆಕ್ಟ್ ಆಗುತ್ತೆ ಅಂತಾರೆ. ಗ್ಲಾಮರ್ ಎಂದರೆ ವ್ಯಕ್ತಿತ್ವವನ್ನು ಗಟ್ಟಿಗೊಳಿಸುವುದೇ ಹೊರತು, ವ್ಯಕ್ತಿತ್ವಕ್ಕೆ ಧಕ್ಕೆ ತರುವಂಥದ್ದಲ್ಲ ಅನ್ನೋದು ಅವರ ವಿವರಣೆ.

 • ಚಿಕ್ಕಣ್ಣ ಕೂಡಾ ಈಗ ನಿರ್ಮಾಪಕ..!

  chikkanna also a producer for rambo 2

  Rambo ಸಿನಿಮಾ ನೆನಪಿದೆಯಲ್ವಾ..? ಶರಣ್‍ರನ್ನು ಸ್ಟಾರ್ ಆಗಿಸಿದ ಸಿನಿಮಾ ಅದು. ಈಗ Rambo 2 ಬರುತ್ತಿದೆ. ಮತ್ತೊಮ್ಮೆ Rambo ಟೀಂ ಜೊತೆಯಾಗಿದೆ. ಒನ್ಸ್ ಎಗೇಯ್ನ್, ಅದು ತಂತ್ರಜ್ಞರೇ ಸೇರಿ ನಿರ್ಮಿಸುತ್ತಿರುವ ಚಿತ್ರ. ಅಂದರೆ, ಚಿತ್ರದ ತಂತ್ರಜ್ಞರೆಲ್ಲರೂ ಚಿತ್ರಕ್ಕೆ ನಿರ್ಮಾಪಕರೇ. ಲಾಭ ಬಂದರೆ, ಪ್ರತಿಯೊಬ್ಬರಿಗೂ ಷೇರ್ ಸಿಗಲಿದೆ. ಅದು ಶರಣ್ ರೂಪಿಸಿರುವ ತತ್ವ.

  ಅಂದಹಾಗೆ ಚಿತ್ರದ ನಿರ್ಮಾಪಕರಲ್ಲಿ ಚಿಕ್ಕಣ್ಣ ಕೂಡಾ ಒಬ್ಬರು. ಕಾಮಿಡಿ ಕಿಲಾಡಿಗಳು ಮೂಲಕ ಕನ್ನಡಿಗರಿಗೆ ಪರಿಚಿತರಾದ ಚಿಕ್ಕಣ್ಣ, ಹುಟ್ಟು ಶ್ರೀಮಂತರೇನಲ್ಲ. ಕೇವಲ ಪ್ರತಿಭೆಯೊಂದನ್ನೇ ಬಂಡವಾಳವನ್ನಾಗಿಸಿಕೊಂಡ ಚಿಕ್ಕಣ್ಣ, Rambo 2 ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಅದು ಚಿಕ್ಕಣ್ಣ ಸಾಧನೆಯಷ್ಟೇ ಅಲ್ಲ, ಶರಣ್ ಔದಾರ್ಯವೂ ಹೌದು.

  ಲಡ್ಡು ಸಿನಿಮಾಸ್ ಬ್ಯಾನರ್‍ನಲ್ಲಿ ಬರುತ್ತಿರುವ ಚಿತ್ರಕ್ಕೆ ಶರಣ್ ಹಾಗೂ ಅಟ್ಲಾಂಟಾ ನಾಗೇಂದ್ರ ಅಧಿಕೃತ  ನಿರ್ಮಾಪಕರು. ಉಳಿದಂತೆ ಚಿಕ್ಕಣ್ಣ, ಛಾಯಾಗ್ರಹಕ ಸುಧಾಕರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಸಂಕಲನಕಾರ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ. ಕೆರೆ, ಮ್ಯಾನೇಜರ್ ನರಸಿಂಹ ಹೀಗೆ ಚಿತ್ರದ ತಾಂತ್ರಿಕ ವರ್ಗದವರೆಲ್ಲ ವರ್ಕಿಂಗ್ ಪಾರ್ಟ್‍ನರ್ಸ್. 

   

   

 • ಮತ್ತೆ ಬಂದ ರಾಂಬೋ

  rambo 2 coming soon

  ಶರಣ್ ಮತ್ತೊಮ್ಮೆ ರಾಂಬೋ ಆಗಿದ್ದಾರೆ. ಎರಡನೇ ಬಾರಿ ನಾಯಕರಾದಾಗ ಶರಣ್‍ಗೆ ಅದ್ಭುತ ಸಕ್ಸಸ್ ನೀಡಿದ್ದ ಚಿತ್ರ ರಾಂಬೋ. ಬಾಕ್ಸಾಫೀಸ್‍ನಲ್ಲೂ ದಾಖಲೆ ಬರೆದಿತ್ತು. ಈಗ ಅದೇ ರಾಂಬೋ ಟೈಟಲ್ ಇಟ್ಟುಕೊಂಡು ರ್ಯಾಂಬೋ-2 ಸಿನಿಮಾ ನಿರ್ಮಿಸಿದ್ದಾರೆ ಶರಣ್.

  ರಾಂಬೋ ಚಿತ್ರದಲ್ಲಿ ಕಾರು ಮತ್ತು ಹಂದಿ ಪ್ರಮುಖ ಪಾತ್ರದಲ್ಲಿದ್ದವು. ಈ ಚಿತ್ರದ ಫಸ್ಟ್‍ಲುಕ್ ನೋಡಿದರೆ, ಈ ಚಿತ್ರದಲ್ಲೂ ಕಾರು ಪ್ರಮುಖ ಪಾತ್ರವಾಗುವ ನಿರೀಕ್ಷೆ ಇದೆ. ಲಡ್ಡು ಬ್ಯಾನರ್‍ನಲ್ಲಿ ರೆಡಿಯಾಗಿರುವ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವುದು ಅನಿಲ್‍ಕುಮಾರ್. ರಾಂಬೋ ಚಿತ್ರಕ್ಕೆ ಹಣ ಹೂಡಿದ್ದವರೆಲ್ಲ ಮತ್ತೆ ಈ ಸಿನಿಮಾ ಮೂಲಕ ಒಂದಾಗಿರುವುದು ಚಿತ್ರದ ವಿಶೇಷ.

  ಕೆಲವೇ ದಿನಗಳಲ್ಲಿ ಚಿತ್ರ ಫೈನಲ್ ಹಂತ ತಲಲುಪಲಿದೆ. ನಗೋಕೆ ರೆಡಿಯಾಗಿ.

#

16 Years To Majestic Gallery

Prema Baraha Success Meet Gallery