` bengaluru city - chitraloka.com | Kannada Movie News, Reviews | Image

bengaluru city

 • Suhasini Says Bangalore Is the Best

  suhasini image

  Just two days before ace director Maniratnam had thanked Bangalore for their great support during last year floods, his wife and well known actress Suhasini has said Bangalore is the best place to learn languages.

  Maniratnam was talking during the seminar at the 08th Bangalore International Film Festival. 'I think Bangalore is the best place to learn languages. I am very much jealous of you people because you get to hear many languages. How lucky can you get' said Suhasini.

  When asked about why she has not acted in any of Maniratnam's films, 'Mani has been politely rejecting answering this question. Maybe I am not a good actress in his view. But we are a good couple. I write dialogues for his films and we work together for the film' said Suhasini.

 • ಇಡ್ಲಿವಡೆಗಾಗಿ ಮಲ್ಲೇಶ್ವರಂಗೆ ಬಂದಿದ್ದರಂತೆ ದೀಪಿಕಾ ಪಡುಕೋಣೆ

  deepika padukone

  ದೀಪಿಕಾ ಪಡುಕೋಣೆಯ ಚಿತ್ರಯಾತ್ರೆ ಶುರುವಾಗಿದ್ದು ಕನ್ನಡದಿಂದಲೇ ಆದರೂ, ಈಗ ಕನ್ನಡ ಚಿತ್ರಗಳ ಕೈಗೆ ಎಟುಕದಷ್ಟು ಎತ್ತರಕ್ಕೆ ಬೆಳೆದಿದ್ದಾರೆ ದೀಪಿಕಾ ಪಡುಕೋಣೆ. ಬಾಲಿವುಡ್​ನ ಸ್ಟಾರ್​ ನಟಿಯಾಗಿರುವ ದೀಪಿಕಾ, ಮೂಲತಃ ಬೆಂಗಳೂರಿನವರೇ. 

  ದೀಪಿಕಾ ಪಡುಕೋಣೆ ಅವರ ಒಂದು ಫೋಟೋ ವೈರಲ್ ಆಗಿದೆ. ಅದು ಬೆಂಗಳೂರಿನ ಮಲೇಶ್ವರಂ ನಲ್ಲಿರೋ ವೀಣಾ ಸ್ಟೋರ್  ಮಾಲೀಕರ ಜೊತೆ ದೀಪಿಕಾ ಪಡುಕೋಣೆ ಇದ್ದ ಫೋಟೋ. ಏನು ವಿಷಯ ಎಂದು ಕೆದಕಿದಾಗ ಗೊತ್ತಾಗಿದ್ದು, ದೀಪಿಕಾ ಬೆಳ್ಳಂಬೆಳಗ್ಗೆ ಆರೂಮೂವತ್ತಕ್ಕೆಲ್ಲ ಇವರ ಹೋಟೆಲ್​ಗೆ ಬಂದು ಇಡ್ಲಿ ವಡೆ ತಿಂದು ಹೋಗಿದ್ದಾರೆ. 

  ಅದೇ ಖುಷಿಯಲ್ಲಿ ಮಾಲೀಕ ಪ್ರದೀಪ್ ಜೊತೆ ಒಂದು ಸೆಲ್ಫಿಗೆ ಫೋಸ್ ಕೊಟ್ಟು ಹೋಗಿದ್ದಾರೆ. ಬೆಂಗಳೂರಿನಲ್ಲಿದ್ದಾಗ ಆಗಾಗ್ಗೆ ಇಲ್ಲಿಗೆ ಬರುತ್ತಿರುತ್ತಾರೆ ಎಂದು ಹೇಳಿದ್ದಾರೆ ಪ್ರದೀಪ್.

 • ನಟ ಜಗ್ಗೇಶ್ ಪುತ್ರನಿಗೆ ರೌಡಿಗಳಿಂದ ಚಾಕು ಇರಿತ

  jaggesh, guru jaggesh image

  ನಟ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಜಗ್ಗೇಶ್ ಮೇಲೆ ರೌಡಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಆರ್‍ಟಿ ನಗರದಲ್ಲಿ ಬೆಳ್ಳಂಬೆಳಗ್ಗೆಯೇ ಈ ಘಟನೆ ನಡೆದಿದೆ. 

  ಇಂದು ಬೆಳಗ್ಗೆ ತಮ್ಮ ಮಗನನ್ನು ಶಾಲೆಗೆ ಬಿಡಲು ಹೋಗಿದ್ದ ಗುರು, ಓವರ್‍ಸ್ಪೀಡ್‍ನಲ್ಲಿ ಬೈಕ್ ಓಡಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಾರೆ. ಈ ವಿಚಾರಕ್ಕೆ ಶುರುವಾದ ಜಗಳ ಚಾಕು ಇರಿತದಲ್ಲಿ ಕೊನೆಯಾಗಿದೆ. ರೌಡಿಗಳು ಗುರುರಾಜ್‍ನ ಎಡತೊಡೆಗೆ ಚಾಕು ಹಆಕಿ ಎಸ್ಕೇಪ್ ಆಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಗುರುರಾಜ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  ಇದರಲ್ಲಿ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆಕಸ್ಮಿಕವಾಗಿ ನಡೆದಿರುವ ಘಟನೆ ಎಂದು ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರು ಪ್ರತ್ಯಕ್ಷದರ್ಶಿಗಳ ಮೂಲಕ ಮಾಹಿತಿ ಸಂಗ್ರಹಿಸಿ ಚಾಕು ಹಾಕಿದವರನ್ನು ಹುಡುಕುತ್ತಿದ್ದಾರೆ.

#

Tagaru Movie Gallery

Prema Baraha Success Meet Gallery